ತರಂಗಿಣಿ ಯಕ್ಷೋತ್ಸವ 2023

Monday, April 8th, 2024

ದಿ: 01-10-2023 ರಂದು ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ “ತರಂಗಿಣಿ ಯಕ್ಷೋತ್ಸವ 2023” ಕಾರ್ಯಕ್ರಮ ನೆರವೇರಿತು. ರಾಜೇಶ ಉಪಾಧ್ಯಾಯ ಮತ್ತು ಶೈಲೇಂದ್ರ ಉಪಾಧ್ಯಾಯ ಇವರ ಸಂಯೋಜನೆಯಲ್ಲಿ ಯಕ್ಷಗಾನ ಪ್ರಸಂಗಗಳು ಅತ್ಯುತ್ತಮವಾಗಿ ಮೂಡಿ ಬಂದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಈ ಕಾರ್ಯಕ್ರಮವು ಯಶಸ್ವಿಯಾಗಲು ಕಾರಣೀಭೂತರಾದ ತರಂಗಿಣಿ ಮಿತ್ರಮಂಡಳಿಯ ಸರ್ವ ಸದಸ್ಯರಿಗೂ ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ, ತನು-ಮನ-ಧನಗಳಿಂದ ಸಹಕರಿಸಿದ ಸರ್ವರಿಗೂ ಸಂಘದ ಪರವಾಗಿ ಅನಂತಾನಂತ ಧನ್ಯವಾದಗಳು.

ಶ್ರೀ ಮಧ್ಯವಾಟ ಮಠ - ಸಂಕೀರ್ತನಾ ಸೇವೆ

ಶ್ರೀ ಮಧ್ಯವಾಟ ಮಠ – ಸಂಕೀರ್ತನಾ ಸೇವೆ

Monday, April 8th, 2024

ಮಧ್ವ ನವಮಿಯ (2024) ಪ್ರಯುಕ್ತ ಶ್ರೀ ಮಧ್ಯವಾಟ ಮಠದಲ್ಲಿ (ಶ್ರೀಮಧ್ವಾಚಾರ್ಯರು ಪ್ರತಿನಿತ್ಯ ಮಧ್ಯಾಹ್ನ ಪೂಜೆ ಮಾಡುತ್ತಿದ್ದ ಸ್ಥಳ; ಬಂಟ್ವಾಳ ತಾಲೂಕಿನ ನಡ್ವಂತಾಡಿ) ತರಂಗಿಣಿ ಮಿತ್ರಮಂಡಳಿ ಸದಸ್ಯರಿಂದ ಸಂಕೀರ್ತನಾ ಸೇವೆಯು ನೆರವೇರಿತು.

ತರಂಗಿಣಿಯ 35 ನೇ ವರ್ಷಾಚರಣೆ - ಪಂಚತ್ರಿಂಶತ್ತಮ ವರ್ಷೋತ್ಸವ

ತರಂಗಿಣಿಯ 35 ನೇ ವರ್ಷಾಚರಣೆ – ಪಂಚತ್ರಿಂಶತ್ತಮ ವರ್ಷೋತ್ಸವ

Monday, April 8th, 2024

  ತರಂಗಿಣಿ ಮಿತ್ರಮಂಡಳಿ (ರಿ) ಮಧ್ವನಗರ, ಪಡುಬಿದ್ರಿ ಮತ್ತುಉಡುಪಿ ತಾ|| ಬ್ರಾಹ್ಮಣ ಮಹಾಸಭಾ (ರಿ) ಉಡುಪಿ ಇದು ರಜತೋತ್ಸವದ ಪ್ರಯುಕ್ತ”ತರಂಗಿಣಿ ಯಕ್ಷೋತ್ಸವ 2023″ , “ಶ್ರೀ ಗಣಪತ್ಯಥರ್ವಶೀರ್ಷಾಧ್ವರ” & “ತರಂಗಿಣಿ ಪ್ರಶಸ್ತಿ – 2023” ದಿ: 01-10-2023 & 02-10-2023 ಸ್ಥಳ : ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಾಂಗಣ, ಪಡುಬಿದ್ರಿ.

ಶಿಕ್ಷಕರ ದಿನಾಚರಣೆ - ಸೆ 5, 2023

ಶಿಕ್ಷಕರ ದಿನಾಚರಣೆ – ಸೆ 5, 2023

Wednesday, September 13th, 2023

ಸೆಪ್ಟಂಬರ್ 5, 2023ರ ‘ಶಿಕ್ಷಕರ ದಿನಾಚರಣೆ’ ಹಿನ್ನೆಲೆಯಲ್ಲಿ ತರಂಗಿಣಿ ಮಿತ್ರಮಂಡಳಿ (ರಿ.) ವತಿಯಿಂದ ನಿವೃತ್ತ ಶಿಕ್ಷಕ ಶ್ರೀ ಚಂದ್ರಶೇಖರ ರಾವ್, ಪಾದೆಬೆಟ್ಟು (ಶೇಖರ ಮಾಸ್ಟ್ರು) ಇವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಮಾಕಾಂತ್ ರಾವ್, ಕಾರ್ಯದರ್ಶಿ ವೈ. ಗಣೇಶ್ ರಾವ್ ಕೋಶಾಧಿಕಾರಿ ಗೋವಿಂದ ರಾವ್, ಹಿರಿಯ ಸದಸ್ಯರಾದ ಸದಾಶಿವ ಆಚಾರ್ ಮುರುಡಿ ಹರಿಕೃಷ್ಣರಾವ್, ಚಂದ್ರಶೇಖರ್ ರಾವ್ ಪಿ.ಕೆ. ಅಕಾಲಿ ಸುರೇಶ್ ರಾವ್, ಕೇಶವ ರಾವ್., ಮೊದಲಾದವರು ಉಪಸ್ಥಿತರಿದ್ದರು.

ಪಂಚತ್ರಿಂಶತ್ತಮ ವರ್ಷೋತ್ಸವ - ಆಮಂತ್ರಣ ಪತ್ರಿಕೆ ಬಿಡುಗಡೆ

ಪಂಚತ್ರಿಂಶತ್ತಮ ವರ್ಷೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆ

Wednesday, September 13th, 2023

ಪಂಚತ್ರಿಂಶತ್ತಮ ವರ್ಷೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆ 35 ನೇ ವರ್ಷಾಚರಣೆಯ ಹೊಸ್ತಿಲಲ್ಲಿರುವ ತರಂಗಿಣಿ ಮಿತ್ರಮಂಡಳಿಯ “ಪಂಚತ್ರಿಂಶತ್ತಮ ವರ್ಷೋತ್ಸವ” ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಸೆ 03, 2023ರ ಭಾನುವಾರ ಬಿಡುಗಡೆ ಗೊಳಿಸಲಾಯಿತು. ತರಂಗಿಣಿ ಪಂಚತ್ರಿಂಶತ್ತಮ ವರ್ಷೋತ್ಸವ ಸಮಾರಂಭದ ಮುಖ್ಯ ಅತಿಥಿಯಾದ ಉದ್ಯಮಿ ಅನಂತರಾಜ್ ಪಡುಬಿದ್ರಿ ಇವರು ಆಮಂತ್ರಣ ಪತ್ರಿಕೆಯನ್ನು ಸಂಘದ ಗೌರವಾಧ್ಯಕ್ಷರಾದ ಪಿ ಸುಧಾಕರ್ ರಾವ್, ಅಧ್ಯಕ್ಷ ರಮಾಕಾಂತ್ ರಾವ್, ಸಂಚಾಲಕ ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಸಂಘದ ಹಿರಿಯ ಸದಸ್ಯರಾದ ಸದಾಶಿವ ಆಚಾರ್, ಚಂದ್ರಶೇಖರ್ ರಾವ್ ಮೊದಲಾದವರಿಗೆ ನೀಡುವ […]

ಸ್ವಾತಂತ್ರ್ಯೋತ್ಸವ - 2023

ಸ್ವಾತಂತ್ರ್ಯೋತ್ಸವ – 2023

Saturday, August 26th, 2023

ನಮ್ಮ ದೇಶದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಗಸ್ಟ್ 15-08-2023 ರ ಬೆಳಗ್ಗೆ ಗಂಟೆ 6.50ಕ್ಕೆ ಸರಿಯಾಗಿ ಮದ್ವನಗರದ ಪೋತ ಮನೆ ವಠಾರದಲ್ಲಿ ತರಂಗಿಣಿ ಮಿತ್ರಮಂಡಳಿ ವತಿಯಿಂದ ಧ್ವಜಾರೋಹಣವು ನಡೆಯಿತು.

ಮಂತ್ರಾಲಯ ಯಾತ್ರೆ

ಮಂತ್ರಾಲಯ ಯಾತ್ರೆ

Saturday, August 26th, 2023

ಸಂಘದ ವತಿಯಿಂದ ದಿನಾಂಕ 12-08-2023ರ ಶನಿವಾರ ಮಂತ್ರಾಲಯ ಯಾತ್ರೆಯನ್ನು ಆಯೋಜಿಸಲಾಗಿತ್ತು.

ನೂರಾರು ಋತ್ಪಿಜರಿಂದ ಜಪ-ಪಾರಾಯಣ-ಹೋಮ

ನೂರಾರು ಋತ್ಪಿಜರಿಂದ ಜಪ-ಪಾರಾಯಣ-ಹೋಮ

Saturday, August 26th, 2023

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರ ಬಹುಮತದೊಂದಿಗೆ ಆಯ್ಕೆಯಾಗಿ ಬರಬೇಕು ಮತ್ತು ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಮಗದೊಮ್ಮೆ ಪ್ರಧಾನಿಯಾಗಬೇಕೆಂಬ ಉದ್ದೇಶದಿಂದ  ಕರ್ಣಾಟಕ ರಾಜ್ಯದ ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ದಿನಾoಕ 30-07-2 023 ರಂದು ನೂರಾರು ಋತ್ಪಿಜರು ● ಶ್ರೀ ವಿಷ್ಣುಸಹಸ್ರನಾಮ ಪಾರಾಯಣ ● ಶ್ರೀರಾಮ ತಾರಕ ಮಂತ್ರ ಹೋಮ ● ಚಂಡಿಕಾ ಹೋಮ ● ಅಥರ್ವಶೀರ್ಷ ಹೋಮ ● ಋಷಭಸೂಕ್ತ ಹೋಮ ● ಮನ್ಯುಸೂಕ್ತ […]

ತರಂಗಿಣಿ ಮಿತ್ರಮಂಡಳಿ (ರಿ.,) – 2023-24 ವಾರ್ಷಿಕ ಮಹಾಸಭೆ

Monday, July 17th, 2023

ತರಂಗಿಣಿ ಮಿತ್ರಮಂಡಳಿ (ರಿ.,) ಇದರ ವಾರ್ಷಿಕ (2023-24) ಮಹಾಸಭೆಯು ಮಧ್ವನಗರ ಪಡುಬಿದ್ರಿಯಲ್ಲಿ ದಿನಾಂಕ 02-07-2023ರಂದು ಜರಗಿತು. ಈ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆಯು ನಡೆಯಿತು. ಸಂಘದ ಅಧ್ಯಕ್ಷರಾಗಿ ರಮಾಕಾಂತ ರಾವ್ ಇವರು ಆಯ್ಕೆಯಾದರು. ಕಾರ್ಯದರ್ಶಿಯಾಗಿ ವೈ. ಗಣೇಶ್ ರಾವ್, ಗೌರವಾಧ್ಯಕ್ಷರಾಗಿ ಶ್ರೀ ಸುಧಾಕರ್ ರಾವ್ ಉಪಾಧ್ಯಕ್ಷರಾಗಿ ಶೈಲೇಂದ್ರ ಉಪಾಧ್ಯಾಯ, ರಾಧಾಕೃಷ್ಣ ಆಚಾರ್, ಜೊತೆ ಕಾರ್ಯದರ್ಶಿಯಾಗಿ ಪ್ರಶಾಂತ ಉಪಾಧ್ಯಾಯ, ಕೋಶಾಧಿಕಾರಿಯಾಗಿ ಗೋವಿಂದ ರಾವ್, ಉಪ ಕೋಶಾಧಿಕಾರಿಯಾಗಿ ಸಂಜಯ್ ಕುಮಾರ್, ಗೌರವ ಸಲಹೆಗಾರರಾಗಿ ಸದಾಶಿವ ಆಚಾರ್, ಚಂದ್ರಶೇಖರ್ ರಾವ್, ನಾರಾಯಣ ರಾವ್, […]

ತರಂಗಿಣಿ ಯಕ್ಷೋತ್ಸವ 2022

ತರಂಗಿಣಿ ಯಕ್ಷೋತ್ಸವ 2022

Monday, September 26th, 2022

ದಿ. 25-9-2022 ರಂದು ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿದ ತರಂಗಿಣಿ ಯಕ್ಷೋತ್ಸವ 2022 ಕಾರ್ಯಕ್ರಮದಲ್ಲಿ ಯಕ್ಷಗಾನ ದಿಗ್ಗಜರಾದ ದಿನೇಶ ಅಮ್ಮಣ್ಣಾಯ, ಕೃಷ್ಣಪ್ರಕಾಶ ಉಳಿತ್ತಾಯ, ವೇಣೂರು ಸದಾಶಿವ ಕುಲಾಲ್, ವೇ.ಮೂ. ಪಾವಂಜೆ ಕೃಷ್ಣ ಭಟ್, ಪಡುಬಿದ್ರಿ ಮೆಸ್ಕಾಂ ಉದ್ಯೋಗಿ ಗಣೇಶ ಕಂಚಿನಡ್ಕ ಇವರನ್ನು ಸನ್ಮಾನಿಸಲಾಯಿತು. ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ 16 ಆಶಾ ಕಾರ್ಯಕರ್ತೆಯರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು. ಹಾಗಯೇ, ದಿ|| ಬಲಿಪ ಪ್ರಸಾದ ಭಟ್ ಇವರ ಕುಟುಂಬಸ್ಥರಿಗೆ ಸಹಾಯಾರ್ಥವಾಗಿ 1 ಲಕ್ಷ ರೂ,ವನ್ನು […]